ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ 1962 ರಲ್ಲಿ 20 ಕಿ.ಮೀ ಅಂತರದಲ್ಲಿರುವ ಎರಡು ನಗರಗಳ ಸಮ್ಮಿಲನದಿಂದ ಹು.ಧಾ.ಮ ಪಾಲಿಕೆಯು ಅಸ್ಥಿತ್ವಕ್ಕೆ ಬಂದಿತು. ಇದು ನಗರಾಡಳಿತ  ಇತಿಹಾಸದಲ್ಲಿಯೇ ಒಂದು ವಿಶಿಷ್ಟ ಪ್ರಯೋಗವಾಗಿರುತ್ತದೆ. ಮಹಾನಗರ ಪಾಲಿಕೆಯ ವ್ಯಾಪ್ತಿ 202.3 ಚ.ಕಿ.ಮೀ ಆವರಿಸಿರುತ್ತದೆ. ಇದರಲ್ಲಿ 45 ಕಂದಾಯ ಗ್ರಾಮಗಳನ್ನು ಒಳಗೊಂಡಿರುತ್ತದೆ. 1991 ರ ಜನಗಣತಿ ಪ್ರಕಾರ ನಗರದ ಜನಸಂಖ್ಯೆ ಸುಮಾರು 7 ಲಕ್ಷ. ಪ್ರಸ್ತುತವಾಗಿ ಜನಸಂಖ್ಯೆ 9.43 ಲಕ್ಷ ಮೀರಿರುತ್ತದೆ.

ಹುಬ್ಬಳ್ಳಿ :
ಹುಬ್ಬಳ್ಳಿ-ಧಾರವಾಡ ನಗರ ಸಭೆಯು ಆಗಷ್ಟ 15 1855 ರಲ್ಲಿ  ಭಾರತ ಸರ್ಕಾರದ ಕಾಯ್ದೆ 1850 ರ ಅಡಿಯಲ್ಲಿ ಸ್ಥಾಪಿತವಾಯಿತು. ಅಧ್ಯಕ್ಷರನ್ನು ಸೇರಿಸಿ 18 ಜನ ಸದಸ್ಯರನ್ನು ನಿಗದಿಪಡಿಸಲಾಗಿತ್ತು. ಜಿಲ್ಲೆಯ ಕಲೆಕ್ಟರರು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಹಾಗೂ ಸದಸ್ಯರನ್ನು ಕಮೀಶನರರೆಂದು ಕರೆಯುತ್ತಿದ್ದರು. ಸರಕಾರವು ಎಲ್ಲ ಸದಸ್ಯರನ್ನು ನೇಮಿಸುತ್ತಿತ್ತು.

ಧಾರವಾಡ:

ಜನೇವರಿ 1 1856 ರಂದು ಧಾರವಾಡ ನಗರ ಸಭೆಯು ಅಸ್ಥಿತ್ವದಲ್ಲಿ ಬಂದಿತು. 1907 ರಲ್ಲಿ ಶ್ರೀಮಾನ ಎಸ್.ಕೆ. ರೊದ್ದ ಇವರು ಮೊದಲ ಸರಕಾರೇತರ ನಗರ ಸಭಾಧ್ಯಕ್ಷರಾಗಿದ್ದರು ಹಾಗೂ ಮುಂಬರುವ ವರ್ಷದಲ್ಲಿ ಶ್ರೀ ಎಸ್.ವಿ. ಮೆಣಸಿನಕಾಯಿ ನಾಮ ನಿರ್ದೇಶಿತರಾದರು. ಶ್ರೀ. ಎನ್.ಜಿ. ಕರಗುದರಿ ಯವರು 1920 ರಲ್ಲಿ ಪ್ರಥಮ ಚುನಾಯಿತ ನಗರ ಸಭಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.