ಕ್ರಮ ಸಂಖ್ಯೆ ಸ್ಥಳ ವಿವರಣೆ ಫೋಟೋ
1 ಮುರುಘಾಮಠ ಇದು ಸೌದತ್ತಿ ರಸ್ತೆಯಲ್ಲಿದ್ದು, ಈ ಮಠಕ್ಕೆ ಮಹಾನ್ ಸಂತ ಮೃತ್ಯಂಜಯನವರ ಮುಖ್ಯಸ್ಥರು ಆಗಿದ್ದರು, ನೂರಾರು ವಿದ್ಯಾರ್ಥಿಗಳು ಹಳ್ಳಿಗಳಿಂದ  ಧಾರವಾಡಕ್ಕೆ ಶಾಲೆ ಮತ್ತು ಕಾಲೇಜಿಗೆ ಬರುತ್ತಿದ್ದರು, ಸನ್ 1994 ರಲ್ಲಿ ಮಹಾಂತಪ್ಪ ದೇವರು ಇವರು ನಿಧನಹೊಂದಿದ ನಂತರ  ಶಿವಯೋಗಪ್ಪನವರು ದೀಕ್ಷಾ ಪಡೆದುಕೊಂಡಿದ್ದರು. 

murugamath

2 ಶಂಕರಮಠ ಇದು ಯಾಲಕ್ಕಿ ಶೆಟ್ಟರ ಕಾಲೋನಿಯಲ್ಲಿದ್ದು ಜೆ ಎಸ್ ಎಸ್ ಕಾಲೇಜಿಗೆ ಹತ್ತರದಲ್ಲಿದೆ. ಇದು ವಾಸ್ತು ಶಿಲ್ಪ ಮಾದರಿಯಲ್ಲಿದ್ದು,ಟೈಲ್ಸ,ಸಿರಾಮಿಕ್ ಪ್ರತಿಮೆಗಳನ್ನು ಒಳಗೊಂಡಿದೆ.ಮಠದ ಸುತ್ತಲು ದಟ್ಟನೆಯ ಹುಲ್ಲುಗಾವಲಿದ್ದು ಎರಡು ಗೊಪುರದ ಮಧ್ಯೆ ಒಂದು ದೊಡ್ಡದಾದ ಧ್ಯಾನ ಮಂದಿರವಿದೆ. Shankar math
3 ಸಿದ್ದಾರೂಢಮಠ  ಸಿದ್ದಾರೂಢ ಸ್ವಾಮಿ ಮಠವು ಶ್ರೀ ಸಿದ್ಧಾರೂಡ ಸ್ವಾಮಿಯ ನೆನಪಿಗಾಗಿ ಸನ್ 1929 ರಲ್ಲಿ ನಿರ್ಮಿಸಲಾಯಿತು.ಇದು ಒಂದು ಯಾತ್ರಾ ಸ್ಥಳವಾಗಿದ್ದು 1919 ರಲ್ಲಿ ಲೋಕಮಾನ್ಯ ಬಾಲ್ ಗಂಗಾಧರ ತಿಲಕ ಮತ್ತು 1924 ರಲ್ಲಿ ಮಹಾತ್ಮ ಗಾಂಧೀಜಿಯವರು ಬೇಟಿ ನಿಡಿದ್ದರು. siddaroodmath
4 ಮೂರುಸಾವಿರಮಠ  ಇದನ್ನು 12ನೇ ಶತಮಾನದಲ್ಲಿ ನಿರ್ಮಿಸಲಾಗಿತ್ತು, ಇಲ್ಲಿ ಗುರುಸಿದ್ದೇಶ್ವರಸ್ವಾಮಿ ಸಮಾಧಿಯನ್ನು ಒಳಗೊಂಡಿದ್ದು, ಈ ಸ್ಥಳದಲ್ಲಿ ಕಲ್ಯಾಣ ಮತ್ತು ಚನ್ನಬಸವಣ್ಣ  ಇವರು ಜೊತೆಗೂಡಿ 3000 ಮೆಟ್ಟಿಲುಗಳನ್ನು ನಿರ್ಮಿಸಿದ್ದರು (ಮೂರು ಸಾವಿರ ಅಂದರೆ ಮೂರುಸಾವಿರ ಕನ್ನಡ ಭಾಷೆಯಲ್ಲಿ ) ಅದಕ್ಕೆ ಮೂರುಸಾವಿರ ಮಠ ಎಂದು ಹೆಸರು ಬಂದಿದೆ. moorsaviramath
5 ಸೋಮೆಶ್ವರ ಗುಡಿ ಇದು ಹಳೇಯ ದೇವಾಲಯಗಳಲ್ಲಿ ಒಂದಾಗಿದ್ದು,12 ನೇ ಶತಮಾನದಲ್ಲಿ ಚಾಲುಕ್ಯರು ನಿರ್ಮಿಸಲಾಗಿದ್ದು,ಇದು ಎಸ್.ಡಿ.ಎಮ್ ಇಂಜಿನಿಯರಿಂಗ್ ಕಾಲೇಜಿಗೆ ಹತ್ತರದಲ್ಲಿರುತ್ತದೆ.ಇಲ್ಲಿ ಮಹಿಷಾಸುರ ಮರ್ದಿನಿ ಮತ್ತು ಚತುರ್ಭುಜ ಗಣಪತಿಯ ವಿಗ್ರಹಗಳು ಇರುತ್ತವೆ.  someshwara temple
6 ತಪೋವನ  ತಪೋವನವು ಅದರ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಿಗೆ ಪ್ರಸಿದ್ಧವಾಗಿದೆ.ಈ ತಪೋವನವನ್ನು ಮಹಾನ್ ದಾರ್ಶನಿಕಕಾರರಾದ ಶ್ರೀ ಕುಮಾರ ಸ್ವಾಮಿಜಿಯವರು ಸ್ಥಾಪಿಸಿದರು.ಅವರ ಭಾಷಣವನ್ನು ಕೇಳಲು ದೇಶದ ಮೂಲೆ ಮೂಲೆಯಿಂದ ಜನ ಇಲ್ಲಿಗೆ ಬರುತ್ತಾರೆ. tapovana
7 ಚಂದ್ರಮೌಳೇಶ್ವರ ದೇವಾಲಯ ಚಂದ್ರಮೌಳೇಶ್ವರ ದೇವಾಲಯವು ಉಣಕಲ್ ವೃತ್ತದ ಪಕ್ಕದಲ್ಲಿದೆ.ಇದು ಚಾಲುಕ್ಯ ಶೈಲಿಯದೇವಾಲಯವಾಗಿದ್ದು,ಚಾಲುಕ್ಯರ ವಾಸ್ತು ಶಿಲ್ಪವನ್ನು ಬಿಂಬಿಸುತ್ತದೆ.ಈ ದೇವಾಲಯವು ಚಾಲುಕ್ಯರ ಅಧಿಕಾರ ಮತ್ತು ಸಂಪತ್ತನ್ನು ಪ್ರದರ್ಶಿಸುತ್ತದೆ. chandramowleshwar
8 ನೃಪತುಂಗ ಬೆಟ್ಟ  ನೃಪತುಂಗ ಬೆಟ್ಟ ಹುಬ್ಬಳ್ಳಿ ಈಶಾನ್ಯಯ  ಅಂಚಿನಲ್ಲಿರುತ್ತದೆ.ಇದು ಒಂದು ಹುಬ್ಪಳ್ಳಿಯ ಪ್ರವಾಸಿ ತಾಣವಾಗಿದ್ದು, ಸುತ್ತಲೂ ಹಸಿರಿನ ನೋಟ,ಗಿಡ ಮರಗಳಿಂದ ಕೂಡಿರುತ್ತದೆ.ಸಂಜೆಯ ವೇಳೆಯಲ್ಲಿ ಸೂರ್ಯಾಸ್ತವನ್ನು ನೋಡಲು ಜನ ಇಲ್ಲಿಗೆ ಬರುತ್ತಾರೆ. ಇಲ್ಲಿಯ ಪಕ್ಷಿನೋಟ ನೋಡುಗರನ್ನು ಆಕರ್ಷೀಸುತ್ತದೆ.ಇದು ಯುವಕರಿಗೆ,ಹಿರಿಯರಿಗೆ ಕಾಲ ಕಳೆಯಲು ವಿಶೇಷ ತಾಣವಾಗಿದೆ. nrupathunga betta
9 ಉಣಕಲ್ಲ ಕೆರೆ ಉಣಕಲ್ ಕೆರೆಯು ಹುಬ್ಬಳ್ಳಿಯಿಂದ 3 ಕಿ ಮೀ ಅಂತರದಲ್ಲಿದ್ದು,ಇದು ಒಂದು ಪ್ರವಾಸಿ ತಾಣವಾಗಿದೆ.ಇದು 100 ವರ್ಷದಷ್ಟು ಹಳೆಯದಾಗಿದ್ದು,200 ಎಕರೆ ಪ್ರದೇಶದಲ್ಲಿ ಆವರಿಸಿರುತ್ತದೆ.ಹುಬ್ಬಳ್ಳಿಯ ಆಕರ್ಷಣೀಯ ಸ್ಥಳಗಳಲ್ಲಿ ಉಣಕಲ್ ಕೆರೆಯು ಒಂದು.ಇದರ ಸುತ್ತಲೂ ಹಸಿರು ಉದ್ಯಾನವನ ಇದ್ದು ಮಕ್ಕಳಿಗೆ ಮನರಂಜನಾ ಸೌಲಭ್ಯಗಳು,ಬೋಟಿಂಗ್ ಸೌಲಬ್ಯಗಳು ಇರುತ್ತದೆ.ಕೆರೆಯ ಮದ್ಯದಲ್ಲಿ ಸ್ವಾಮೀ ವಿವೇಕಾನಂದರ ಪ್ರತಿಮೆ ಇದ್ದು ನೋಡುಗರಿಗೆ ಆಕರ್ಷಣೀಯವೆನಿಸುತ್ತದೆ. ಸಂಜೆಯ ಸೋರ್ಯಾಸ್ತವನ್ನು ನೋಡಲು ಜನರು ಇಲ್ಲಿ ವಿಹರಿಸುತ್ತಾರೆ.  unkal
10 ಸಾಧನಕೇರಿ ಸಾಧನಕೇರಿಯು ಧಾರವಾಡದಲ್ಲಿದ್ದು ಹುಬ್ಬಳ್ಳಿಯಿಂದ 30 ನಿಮಿಷದ ಪ್ರಯಾಣವಾಗಿರುತ್ತದೆ. ಮಹಾನ್ ಕನ್ನಡ ಕವಿ ಡಾ. ದ ರಾ ಬೇಂದ್ರೆಯವರು ಬಾರೋ ಸಾದನಕೇರಿಗೆ ಎಂಬ ಒಂದು ಸುಂದರ ಹಾಡನ್ನು ಈ ಕೆರೆಯ ಕುರಿತಾಗಿ ಬರೆದಿದ್ದಾರೆ.ಇಲ್ಲಿ ಒಂದು ಉದ್ಯಾನವನವಿದ್ದು,ಬೋಟಿಂಗ್ ವ್ಯವಸ್ಥೆ ಕೂಡ ಇರುತ್ತದೆ sadhan keri

 

 

ಮೂಲ :  ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಕರ್ನಾಟಕ ಸರ್ಕಾರ.